ಕನ್ನಡ: ಹೇಗೆ ದೂರು ಸಲ್ಲಿಸಲು

Arne Hoel, The World Bank

CAO IFC/MIGA ಯೋಜನೆಗಳ ಕುರಿತಾದ ಆತಂಕಕಾರಿ ವಿಚಾರಗಳನ್ನು ಬಗೆಹರಿಸಲು ಜಗತ್ತಿನಾದ್ಯಂತದ ಸಮುದಾಯಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಾರೆ. CAOಗೆ ದೂರು ಸಲ್ಲಿಸುವುದು ಹೇಗೆ ಮತ್ತು ಈ ಪ್ರಕ್ರಿಯೆಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಈ ವಿಭಾಗವು ವಿವರಿಸುತ್ತದೆ. ನಾವು ಮಾಡುವ ಕೆಲಸ ಮತ್ತು ನಾವು ಒದಗಿಸಬಹುದಾದ ಪರಿಹಾರೋಪಾಯಗಳ ಬಗ್ಗೆ ಹೆಚ್ಚು ತಿಳಿಯಲು ನಮ್ಮ ಪ್ರಕರಣಗಳನ್ನು ಬ್ರೌಸ್ ಮಾಡಿ.

CAO ಎಂದರೇನು?

CAO ವಿಶ್ವ ಬ್ಯಾಂಕಿನ ಖಾಸಗಿ ಕ್ಷೇತ್ರದ ಏಜೆನ್ಸಿಗಳಾದ ಅಂತರಾಷ್ಟ್ರೀಯ ಹಂಣಕಾಸು ಸಂಸ್ಥೆ (IFC) ಮತ್ತು ಮಲ್ಟಿಲ್ಯಾಟರಲ್ ಇನ್ವೆಸ್ಟ್‌ಮೆಂಟ್ ಗ್ಯಾರಂಟಿ ಏಜೆನ್ಸಿ (MIGA) ಗಳಿಂದ ಬೆಂಬಲಿತ ಯೋಜನೆಗಳ ಸ್ವತಂತ್ರ ಸಂಪನ್ಮೂಲ ಯಂತ್ರವಾಗಿದೆ. IFC ಮತ್ತಿ MIGA ಜಗತ್ತಿನಾದ್ಯಂತದ ದೇಶಗಳಲ್ಲಿ ಖಾಸಗಿ ಕ್ಷೇತ್ರದ ಬೆಳವಣಿಗೆಯ ಮೂಲಕ ಬಡತನ ನಿವಾರಣೆಯನ್ನು ಉತ್ತೇಜಿಸುತ್ತಿದೆ. IFCಅಥವಾ ಎಂಐಜಿಎ ಯೋಜನೆಯಿಂದ ತಮಗೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತದೆ ಎಂದು ಜನರು ಭಾವಿಸಿದಾಗ ಅವರ ಆತಂಕಗಳ ಬಗ್ಗೆ ಅವರು CAOಗೆ ದೂರಿಕೊಳ್ಳಬಹುದು. CAO ಸ್ಥಳೀಯವಾಗಿ ಯೋಜನೆಯಲ್ಲಿ ಭಾಗಿಯಾದ ಎಲ್ಲರೊಡನೆ ಕೆಲಸ ಮಾಡಿ ಸಾಮಾಜಿಕ ಮತ್ತು ಪರಿಸರ ಸಂಬಂಧಿ ಪರಿಣಾಮಗಳ ಕುರಿತು ನೈಜ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ನೆರವಾಗುತ್ತಾರೆ.

ಯಾರು ದೂರನ್ನು ಸಲ್ಲಿಸಭುದು?

ಯಾವುದೇ ವ್ಯಕ್ತಿ, ಗುಂಪು, ಸಮುದಾಯ ಅಥವಾ ಇತರ ಯಾರೇ ಆದರೂ IFCಅಥವಾ MIGA ಯೋಜನೆ(ಗಳು) ಅವರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಅಥವಾ ಬೀರಬಲ್ಲುದು ಎಂದು ಅವರು ಭಾವಿಸಿದರೆ ಅಂಥವರಿ CAOಗೆ ದೂರು ಸಲ್ಲಿಸಬಹುದು. ಸಂತ್ರಸ್ತರ ಪರವಾಗಿ ದೂರನ್ನು ಅವರ ಪ್ರತಿನಿಧಿ ಅಥವಾ ಸಂಘಟನೆ ಮಾಡಬಹುದು.

ದೂರನ್ನು ಸಲ್ಲಿಸಲು ಮಾನದಂಡಗಳೇನು?

CAO ಯಾವುದೇ ದೂರು ವಿಶ್ಲೇಷಣೆಗೆ ಅರ್ಹವಾಗಲು 3 ಸರಳ ಮಾನದಂಡಗಳನ್ನು ಹೊಂದಿದೆ:

  • IFCಅಥವಾ MIGAಯೋಜನೆಗಳ ಬಗ್ಗೆ (ಪರಿಗಣನೆಯಲ್ಲಿರುವ ಯೋಜನೆಗಳೂ ಸೇರಿ) ಸಂಬಂಧಿಸಿದ ದೂರು
  • ಆ ಯೋಜನೆ(ಗಳಿ)ಗೆ ಸಂಬಂಧಿಸಿದ ಸಾಮಾಜಿಕ ಮತ್ತು/ಅಥವಾ ಪರಿಸರ ಸಂಬಂಧಿ ವಿಚಾರಗಳಿಗೆ ಸಂಬಂಧಿಸಿದ ದೂರು
  • ತಾವು ಎತ್ತಿರುವ ಸಾಮಾಜಿಕ ಮತ್ತು/ಅಥವಾ ಪರಿಸರ ಸಂಬಂಧಿ ವಿಚಾರಗಳಿಂದ ತಾವು ಬಾಧಿತರಾಗುತ್ತೇವೆ ಅಥವಾ ಆಗಿದ್ದೇವೆ ಎಂದು ದೂರುದಾರರು ಭಾವಿಸುವುದು
ಯಾವ ರೀತಿಯ ದೂರಗಳನ್ನು ಸ್ವೀಕರಿಸಲಾಗುವುದಿಲ್ಲ?
  • CAO ೩ ಅರ್ಹತಾ ಮಾನದಂಡಗಳನ್ನು ಪೂರೈಸದ ದೂರುಗಳನ್ನು ಸ್ವೀಕರಿಸುವುದಿಲ್ಲ. ದೂರು ಇತರ ಹಣಕಾಸು ಒದಗಿಸುವ ಸಂಸ್ಥೆಗಳಿಗೆ ಸಂಬಂಧಿಸಿದ್ದರೆ (ಅರ್ಥಾತ್ IFC ಅಥವಾ MIGA ಅಲ್ಲ) ಅಂತಹ ದೂರುಗಳನ್ನು CAO ಸಮರ್ಪಕ ಕಛೇರಿಗೆ ಕಳುಹಿಸಬಹುದು.
  • ವಂಚನೆ ಮತ್ತು ಭೃಷ್ಟಾಚಾರದ ಬಗ್ಗೆ ಇರುವ ಆಪಾದನೆಗಳನ್ನು ಹೊಂದಿರುವ ದೂರುಗಳನ್ನು ವಿಶ್ವಬ್ಯಾಂಕಿನ ಕಛೇರಿಯ ಸಾಂಸ್ಥಿಕ ಸಮಗ್ರತೆಗೆ ಕಳುಹಿಸಲಾಗುವುದು. CAO IFC ಮತ್ತು MIGAಗಳ ಸ್ವಾಧೀನತೆಗೆ ಸಂಬಂಧಿಸಿದ ನಿರ್ಣಯಗಳ ಬಗ್ಗೆ ದೂರುಗಳನ್ನು ಪರಿಶೀಲಿಸುವುದಿಲ್ಲ.  
  • ಕ್ಷುಲ್ಲಕ, ಸುಳ್ಳು ಅಥವಾ ಸ್ವಂತ ಲಾಭಕ್ಕೋಸ್ಕರ ಮಾಡಿದ ದೂರುಗಳನ್ನು CAO ಸ್ವೀಕರಿಸುವುದಿಲ್ಲ.
ನಾನು ಯಾವುದೇ ಕ್ಲೇಮ್‌ಗಳನ್ನು ಮಡಲು ಸಾಕ್ಷ್ಯಾಧಾರಗಳು ಬೇಕೆ?

ಇಲ್ಲ, ದೂರನ್ನು ಸಲ್ಲಿಸಲು ನೀವು ಯಾವುದೇ ಸಾಕ್ಷ್ಯಾಧಾರಗಳನ್ನು ಸಲ್ಲಿಸಬೇಕಾಗಿಲ್ಲ. ಆದಾಗ್ಯೂ ನೀವು ನಿಮ್ಮ ಪ್ರಕರಣಕ್ಕೆ ಬೆಂಬಲವಾಗಿ ಹೆಚ್ಚುವರಿ ದಾಕಲೆಗಳನ್ನು ಸಲ್ಲಿಸಿದರೆ ಅದಕ್ಕೆ ಸ್ವಾಗತವಿದೆ.

ನಾನು ಗೌಪ್ಯತೆಯನ್ನು ವಿನಂತಿಸಬಹುದೆ?

ಹೌದು, CAO ಗೌಪ್ಯತೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಮತ್ತು ವಿನಂತಿಸಿದರೆ ನಾವು ದೂರುದಾರರ ಗುರುತನ್ನು ಬಹಿರಂಗಪಡಿಸುವುದಿಲ್ಲ. ಗೌಪ್ಯತೆಯನ್ನು ವಿನಂತಿಸದ ಸಂದರ್ಭಗಳಲ್ಲಿ, ದೂರನ್ನು ನಿಭಾಯಿಸುವ ಒಂದು ಪ್ರಕ್ರಿಯೆಯ ಬಗ್ಗೆ ದೂರುದಾರರು ಮತ್ತು CAO ಒಂದು ಒಪ್ಪಂದಕ್ಕೆ ಬರುತ್ತಾರೆ. ಇದಲ್ಲದೆ, ದೂರುದಾರರು ಗೌಪ್ಯತೆಯ ಅಧಾರದಲ್ಲಿ ಸಲ್ಲಿಸಿದ ಬೆಂಬಲದ ದಾಖಲೆಗಳನ್ನು ದೂರುದಾರರ ಪರವಾನಗಿ ಇಲ್ಲದೆ ಬಿಡುಗಡೆ ಮಾಡುವುದಿಲ್ಲ.

ನಾನು ದೂರು ಸಲ್ಲಿಸಿದ ನಂತರ ಏನಾಗುತ್ತದೆ?

CAO ನೀವು ಯಾವ ಭಾಷೆಯಲ್ಲಿ ದೂರನ್ನು ಸಲ್ಲಿಸಿದ್ದೀರೊ ಆ ಭಾಷೆಯಲ್ಲಿ ದೂರನ್ನು ಸ್ವೀಕರಿಸುತ್ತದೆ. 15 ಕೆಲಸದ ದಿನಗಳ ಒಳಗೆ (ದೂರು ಮತ್ತು ಬೆಂಬಲಕ್ಕೆ ಸಲ್ಲಿಸಿದ ದಾಖಲೆಗಳ ಭಾಷಾಂತರಕ್ಕೆ ತಗಲುವ ದಿನಗಳನ್ನು ಪರಿಗಣಿಸಿಲ್ಲ) ನಿಮ್ಮ ದೂರು ಮುಂದಿನ ವಿಶ್ಲೇಷಣೆಗೆ ಅರ್ಹವಾಗಿದೆಯೆ ಎಂಬುದನ್ನು CAO ನಿಮಗೆ ತಿಳಿಸುತ್ತಾರೆ. ಅರ್ಹವಾದರೆ, ನಿಮ್ಮ ಆತಂಕವನ್ನು ಪರಿಹರಿಸಲು ನೆರವಾಗಲು CAO ಹೇಗೆ ಕೆಲಸ ಮಾಡುತ್ತಾರೆ ಎಂಬ ಮಾಹಿತಿಯನ್ನು ನೀವು ಪಡೆಯುವಿರಿ ಮತ್ತು CAO ತಜ್ಞರೋರ್ವರು ನಿಮ್ಮನ್ನು ವೈಯಕ್ತಿಕವಾಗಿ ಸಂಪರ್ಕಿಸುತ್ತಾರೆ.  

ದೂರನ್ನು ನಿಭಾಯಿಸುವ ಪ್ರಕ್ರಿಯೆ ಹೇಗೆ ನಡೆಯುತ್ತದೆ?

CAO ಪ್ರತಿಯೊಂದು ದೂರನ್ನು ನಿಭಾಯಿಸಲು ಒಂದು ನಿರ್ದಿಷ್ಟ ಕಾರ್ಯವಿಧಾನವನ್ನು ಅನುಸರಿಸುತ್ತದೆ ಮತ್ತು ಅದು ದೂರನ್ನು ಒಂದು ಸಮಯ ಮಿತಿಯೊಳಗೆ ಪರಿಹರಿಸಲು ಬದ್ದವಾಗಿದೆ. ದೂರು CAOರವರ 3 ಅರ್ಹತಾ ಮಾನದಂಡಗಳನ್ನು ಪೂರೈಸಿದರೆ:

  • CAO ಸಾರ್ವಜನಿಕ ತನಿಖಾಧಿಕಾರಿಗಳು ದೂರುದಾರರು ಎತ್ತಿರುವ ವಿಚಾರಗಳ ಬಗ್ಗೆ ಇತ್ತಂಡಗಳಿಗೂ ಒಪ್ಪಿಗೆಯಾಗುವ ಪರಿಹಾರವೊಂದನ್ನು ಕಂಡುಕೊಳ್ಳುವ ಸಲುವಾಗಿ ದೂರುದಾರರು, ಯೋಜನೆಯ ಪ್ರಾಯೋಜಕರು ಮತ್ತು ಸ್ಥಳೀಯ ಪಾಲುದಾರರೊಡನೆ ಮೊದಲು ಮಾತನಾಡುತ್ತಾರೆ.
  • ಸಮಸ್ಯೆಯನ್ನು ಹೇಗೆ ಪರಿಹರಿಸಬಹುದೆಂಬುದಕ್ಕೆ ಒಂದು ಒಪ್ಪಂದಕ್ಕೆ ಇತ್ತಂಡಗಳು ಒಪ್ಪದಿದ್ದಲ್ಲಿ, CAO ಕಂಪ್ಲಾಯನ್ಸ್ IFC/MIGAಯ ಅನುವರ್ತನೆಯ ಅಂದಾಜನ್ನು ಸೂಕ್ತ ಸಾಮಾಜಿಕ ಮತ್ತು ಪರಿಸರ ಸಂಬಂಧಿ ನಿಯಮಗಳ ಪ್ರಕಾರ ಇದೆಯೆ ಎಂದು ಅಂದಾಜು ಮಾಡುತ್ತಾರೆ ಮತ್ತು ಈ ಕುರಿತು ಒಂದು ಪರಿಶೋಧನೆ ಅಗತ್ಯವೆ ಎಂಬುದರ ಕುರಿತು ಮಾರ್ಗದರ್ಶನ ಮಾಡುತ್ತಾರೆ.  

ಸಮಯ ಮಿತಿಯ ಬಗ್ಗೆ ವಿವರಗಳಿಗಾಗಿ CAO ಕಾರ್ಯಾಚರಣೆ ಮಾರ್ಗದರ್ಶಿ ಸೂತ್ರಗಳನ್ನು ನೋಡಿರಿ.

ದೂರಿನ ಮೇಲೆ CAO ಸಾರ್ವಜನಿಕ ತನಿಖಾಧಿಕಾರಿ (ಒಂಬುಡ್ಸ್‌ಮನ್) ಹೇಗೆ ಕೆಲಸ ಮಾಡುತ್ತಾರೆ?

CAO ಸಾರ್ವಜನಿಕ ತನಿಖಾಧಿಕಾರಿಯು ಸ್ಥಿತಿಯ ವಿಶ್ಲೇಷಣೆ ನಡೆಸುತ್ತಾರೆ ಮತ್ತು ದೂರನ್ನು ಬಗೆಹರಿಸಲು ಅತ್ಯುತ್ತಮ ಪರ್ಯಾಯಗಳ ಬಗ್ಗೆ ನಿರ್ಧಾರ ಮಾಡುತ್ತಾರೆ. ಸಾರ್ವಜನಿಕ ತನಿಖಾಧಿಕಾರಿ ದೂರಿನ ಯೋಗ್ಯತೆಯ ಬಗ್ಗೆ ನಿರ್ಣಯ ಕೈಗೊಳ್ಳುವುದಿಲ್ಲ ಮತ್ತು ಅದು ಪರಿಹಾರಗಳನ್ನು ಹೇರುವುದಿಲ ಅಥವಾ ತಪ್ಪುಗಳನ್ನು ಹುಡುಕುವುದಿಲ್ಲ. ನಮ್ಮ ಪರಿಣತರು ಪರ್ಯಾಯ ನಿಲುವುಗಳು ಮತ್ತು ವ್ಯೂಹಗಳನ್ನು ಕಂಡುಹುಡುಕಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ. ಇದು ಜಂಟಿ ಸತ್ಯ ಶೋಧನೆ, ಪ್ರಮುಖ ಪಾಲುದಾರರೊಡನೆ ಚರ್ಚೆ ಏರ್ಪಡಿಸುವುದು, ತಂಡಗಳ ನಡುವಿನ ಭಿನ್ನ್ಭಾಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸಲು ಮಧ್ಯವರ್ತಿಯಾಗುವುದು ಅಥವಾ ಮಾತುಕತೆಯನ್ನು ಅಥವಾ ಜಂಟಿ ನಿಗಾವಣಾ ಕಾರ್ಯಕ್ರಮವನ್ನು ಏರ್ಪಡಿಸುವುದು ಇದರಲ್ಲಿ ಒಳಗೊಂಡಿದೆ. CAO ತಜ್ಞರು ಪರ್ಯಾಯ ವಿವಾದ ಠರಾವು (ಅಲ್ಟರ್ನೇಟಿವ್ ಡಿಸ್ಪ್ಯುಟ್ ರೆಸೊಲ್ಯೂಶನ್ -ಎಡಿಆರ್) ಇದರಲ್ಲಿ ತರಬೇತಿ ಪಡೆದಿದ್ದು ವಿವಾದ ವಿಶ್ಲೇಷಣೆ, ಸಂಧಾನ ಮತ್ತು ಹಲವು ತಂಡಗಳ ನಡುವೆ ಮಧ್ಯಸ್ಥಿಕೆಯಲ್ಲಿ ನುರಿತವರಾಗಿದ್ದಾರೆ. ನಾವು ಸ್ವತಂತ್ರ ಸಂಧಾನಕಾರರನ್ನು ಹೊಂದಿದ್ದು ಅವರು ದೇಶ ನಿರ್ದಿಷ್ಟ ಅನುಭವನ್ನು ಹೊಂದಿದ್ದಾರೆ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಟಾನ ಮತ್ತು ಸಹಮತ ಏರ್ಪಡಿಸುವಲ್ಲಿ ನಿಪುಣರಾಗಿದ್ದಾರೆ. ನಮ್ಮ ಕೆಲಸದ ಬಗ್ಗೆ ಹೆಚ್ಚು ಉದಾಹರಣೆಗಳನ್ನು ತಿಳಿಯಲು ನಮ್ಮ ಪ್ರಕರಣಗಳನ್ನು ಬ್ರೌಸ್ ಮಾಡಿ.

CAO ಕಂಪ್ಲಾಯನ್ಸ್‌ರವರ ಪಾತ್ರವೇನು?

ನಮ್ಮ ಸಾರ್ವಜನಿಕ ತನಿಖಾಧಿಕಾರಿಯಿಂದ ದೂರಿನ ಪರಿಹಾರ ಸಾಧ್ಯವಿಲ್ಲವಾದರೆ ಈ ಪ್ರಕರಣವನ್ನು CAO ಕಂಪ್ಲಾಯನ್ಸ್ ಕೈಗೆತ್ತಿಕೊಳ್ಳುತ್ತಾರೆ. ಈ ’ಅನುವರ್ತನೆ ಪರೀಕ್ಷೆಯ’ ಉದ್ದೇಶ ದೂರುದಾರರುIFCಅಥವಾ ಎಂಐಜಿಎಯ ಸಾಮಾಜಿಕ ಮತ್ತು ಪರಿಸರ ಸಂಬಂಧಿ ಸಾಧನೆಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿವೆಯೆ ಎಂಬುದನ್ನು ವಿಶ್ಲೇಷಿಸುವುದು. CAO ಒಂದು ಅಂದಾಜನ್ನು ಮಾಡುತ್ತದೆ ಮತ್ತು ಪರಿಶೋಧನೆ ಅಗತ್ಯವಾದಲ್ಲಿ ವಿಚಾರಗಳ ಬಗ್ಗೆ ತನಿಖೆ ನಡೆಸಲು ಒಂದು ಸ್ವತಂತ್ರ ತಂಡವನ್ನು ರಚಿಸಲಾಗುತ್ತದೆ. ಇದರ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುತ್ತದೆ ಮತ್ತು ಇದರ ಶಿಫಾರಸುಗಳು ಅನುಷ್ಟಾನಗೊಳ್ಳುವವರ್ಗೆ CAO ನಿಗಾ ವಹಿಸುತ್ತದೆ. ಮುಖ್ಯವಾಗಿ ಅನುವರ್ತನೆ ಪರಿಶೋಧನೆ IFC ಮತ್ತ್ MIGAಯ ಮೇಲೆ ಕೇಂದ್ರೀಕರಿಸುತ್ತದೆ ವಿನಃ ಯೋಜನೆಯ ಪ್ರಾಯೋಜಕರ ಮೇಲಲ್ಲ (IFC/MIGAಯ ಬೆಂಬಲ ಪಡೆದ ಖಾಸಗಿ ಕ್ಷೇತ್ರದ ಗ್ರಾಹಕ).

 

ನಾನು ನನ್ನ ದೂರನ್ನು ಹೇಗೆ ಮತ್ತು ಎಲ್ಲಿ ಸಲ್ಲಿಸುವುದು?

ದೂರುಗಳನ್ನು ಲಿಖಿತವಾಗಿ ಯಾವುದೇ ಭಾಷೆಯಲ್ಲಿ ಬೇಕಾದರೂ ಸಲ್ಲಿಸಬಹುದು. ದೂರುಗಳನ್ನು ಇ-ಮೇಲ್, ಫ್ಯಾಕ್ಸ್, ಅಂಚೆ/ಟಪಾಲು ಮೂಲಕ ಕಳುಹಿಸಬಹುದು ಅಥವಾ ವಾಷಿಂಗ್ಟನ್ ಡಿಸಿಯಲ್ಲಿರುವ CAO ಕಚೇರಿಗೂ ಬಟವಾಡೆ ಮಾಡಬಹುದು. ದೂರು ಸಲ್ಲಿಸುವುದು ಹೇಗೆ ಎಂಬ ಕುರಿತು ಮಾರ್ಗದರ್ಶನಕ್ಕಾಗಿ ಮೇಲಿನ ’ದೂರು ಪತ್ರ ಟೆಂಪ್ಲೇಟ್’’ ನೋಡಿ.

ನಮ್ಮನ್ನು ಸಂಪರ್ಕಿಸಿ

ದೂರನ್ನು ಸಲ್ಲಿಸುವ ಕುರಿತು ಅಥವಾ ನಾಗರಿಕ ಸಮಾಜದ ಜೊತೆ CAOರವರ ಕೆಲಸದ ಕುರಿತು ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಾವು ನಿಮ್ಮನ್ನು ಕೇಳಲು ಕಾತರರಾಗಿದ್ದೇವೆ.

Office of the CAO

2121 Pennsylvania Avenue, NW

Washington, DC 20433, USA

ದೂ: + 1 202 458 1973

ಫ್ಯಾ: + 1 202 522 7400

ಇ-ಮೇಲ್: CAO-compliance@ifc.org